1. ಧೋನಿ ಮತ್ತು ರೈನಾ ನಿವೃತ್ತಿ
    16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಮಹೇಂದ್ರ ಸಿಂಗ್ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ಕೇವಲ ಐಪಿಎಲ್ ನಲ್ಲಿ ಮಾತ್ರ ಕ್ರೀಡಾಂಗಣಕ್ಕೆ ಇಳಿಯಲಿದ್ದಾರೆ.
    ತಮ್ಮ ಗೆಳೆಯ ವಿದಾಯ ಹೇಳುತ್ತಿದ್ದಂತೆ ಸುರೇಶ್ ರೈನಾ ಕೂಡಾ ನಿವೃತ್ತಿ ಘೋಷಿಸಿದ್ದಾರೆ. 15 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಿದ್ದು, ಮುಂದೆ ಧೋನಿಯಂತೆ ಕೇವಲ ಐಪಿಎಲ್ ನಲ್ಲಿ ಮಾತ್ರ ಕ್ರೀಡಾಂಗಣಕ್ಕೆ ಧುಮುಕಲಿದ್ದಾರೆ.

2. ದೇಶಾದ್ಯಂತ ಸರಳವಾಗಿ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆ
ಕೊರೊನಾ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ.

3. ರಾಜ್ಯದಲ್ಲಿ 8 ಸಾವಿರದ ಗಡಿ ದಾಟಿದ ಕೊರೊನಾ.
ನಿನ್ನೆ ಒಂದೇ ದಿನ ರಾಜ್ಯದಲ್ಲಿ 8818 ಜನರಿಗೆ ಸೋಂಕು ದೃಢಪಟ್ಟಿದೆ. ರಾಜಧಾನಿಯಲ್ಲಿ ದಾಖಲೆಯ 3485 ಮಂದಿಗೆ ಸೋಂಕು ತಗುಲಿದೆ. ಅದೇ ರೀತಿ 6629 ಜನ ಡಿಸ್ಚಾರ್ಜ್ ಆಗಿದ್ದಾರೆ.

4. ಎಸ್ಪಿಬಿ ಗೆ ಐ ಸಿ ಯು ನಲ್ಲಿ ಚಿಕಿತ್ಸೆ.
ಭಾರತೀಯ ಚಿತ್ರರಂಗದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಐ ಸಿ ಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಪುತ್ರ ಚರಣ್ ತಿಳಿಸಿದ್ದಾರೆ.

5. ದೇಶದ ಪ್ರತಿ ನಾಗರಿಕನಿಗೂ ಹೆಲ್ತ್ ಕಾರ್ಡ್
ಇನ್ನು ಮುಂದೆ ದೇಶದ ಎಲ್ಲಾ ಜನರಿಗೂ ಆಧಾರ್ ಕಾರ್ಡ್ ನಂತೆ ಆರೋಗ್ಯ ಕಾರ್ಡ್ ಕೂಡಾ ನೀಡಲಾಗುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here