1. ಭಾನುವಾರ 12,209 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲು
ರಾಜ್ಯದಲ್ಲಿ ಭಾನುವಾರ 12,209 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 26,95 ಲಕ್ಷ ದಾಟಿದೆ. ಅದೇ ರೀತಿ ನಿನ್ನೆ ಒಂದೇ ದಿನ 25,659 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 24,09 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,54 ಲಕ್ಷಕ್ಕಿಂತಲೂ ಹೆಚ್ಚು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

2. ಇಂದಿನಿಂದ ಆದಾಯ ತೆರಿಗೆ ಸಲ್ಲಿಸಲು ಹೊಸ ವೆಬ್ ಸೈಟ್ ಆರಂಭ
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೇಂದ್ರ ಸರ್ಕಾರ ಹೊಸ ವೆಬ್ ಸೈಟ್ ರೂಪಿಸಿದ್ದು, www.incometax.gov.in ಗೆ ಸೋಮವಾರ ಚಾಲನೆ ನೀಡಲಿದೆ.

3. ಭಾರತಕ್ಕೆ ಬಾಂಗ್ಲಾದೇಶ ಸವಾಲು
2022ರ ಫೀಫಾ ವಿಶ್ವಕಪ್ ಹಾಗೂ 2023ರ ಏಷ್ಯನ್ ಕಪ್ ಗೆ ಅರ್ಹತೆ ಪಡೆಯಲು ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿರುವ ಭಾರತ ಫುಟ್ಬಾಲ್ ತಂಡ ಸೋಮವಾರ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ.

4. ಇಂಗ್ಲೆಂಡ್ – ನ್ಯೂಜಿಲೆಂಡ್ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯ
ಆತಿಥೇಯ ಇಂಗ್ಲೆಂಡ್ ಹಾಗೂ ಪ್ರವಾಸಿ ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಪಂದ್ಯದ ಕೊನೆಯ ದಿನ 273 ರನ್ ಗಳ ಗುರಿ ಪಡೆದ ಇಂಗ್ಲೆಂಡ್ ತಂಡ 3 ವಿಕೆಟ್ ಗೆ 170 ರನ್ ಗಳಿಸಿದ್ದಾಗ ಉಭಯ ನಾಯಕರು ಡ್ರಾಗೊಳಿಸಲು ಸಮ್ಮತಿಸಿದರು.

LEAVE A REPLY

Please enter your comment!
Please enter your name here