ಮಳೆಗಾಲ ಅಂದ್ರೆ ಕೇವಲ ಮಳೆ ಮಾತ್ರ ಅಲ್ಲ..ಅದೊಂದು ಭಯವು ಹೌದು…”ನಾಳೆ ಇಂದ ಹೊಸ ಮಳೆ ಅಂತೇ”..ಅಂತ ಯಾರಾದ್ರು ಹೇಳ್ದ್ರೆ…ಅಮೇಲೆ ಅದೇ ಚಿಂತೆ ನಾಳೆ ಮಳೆ ಕಡಿಮೆ ಆಗಬಹುದಾ ಇಲ್ಲವಾಂತ.
ಮಲೆನಾಡಿನಲ್ಲಿ ಇದು ಗದ್ದೆ ಗಳು ನಾಟಿ ಮಾಡಿ ಜೀವತುಂಬುವ ಸಮಯ‌ ಹಿಂದೆಲ್ಲ ಕೊಣ,ಎತ್ತು ಗಳಿಂದ ಗದ್ದ ಹೂಡುವಾಗ…ಎತ್ತು ಗಳ ಮುಂದೆ ನಡೆಸಲು,ತಿರುಗಿಸಲು..ನಿದಾನ ಚಲಿಸು..ವಿವಿದ ಶಬ್ದ ಗಳನ್ನುಚ್ಛರಿಸುದು ಕೇಳಬಹುದಿತ್ತು. ಆದರೆ ಈಗ ಟಿಲ್ಲರ್ ನಾ “ಕಟಕಟ” ಎನ್ನುವ ದ್ವನಿ ಮಾತ್ರ.
ಈ ಮಳೆ ಯಲ್ಲು ಹಳ್ಳಿಗರು ಒಂದ್ ಕಂಬ್ಳಿ ಇಲ್ಲ ಪ್ಲಾಸ್ಟಿಕ್ ಹಿಡ್ಕೊಂಡು ಸುತ್ಬರೊದ್ ಮಾಮೂಲಿ.
ಇಲ್ಲಿ ಸರ್ವೇಸಾಮಾನ್ಯ ಹಂಚಿನ ಮನೆಗಳು ಬೇಸಿಗೆ ಪೂರ್ತಿ ಹೊಗೆಯಿಂದ ಕರಿ ಹಿಡಿದ ಹಂಚುಗಳ ಸಂದಿಯಿಂದ ಮನೆಯ ತುಂಬೆಲ್ಲ ಕರಿ ನೀರು ಇಳಿಯುವುದುಂಟು ಮತ್ತೇನಿಲ್ಲ ಹಾಳೆ ಕತ್ತರ್ಸುದು ಇಡುದು ಅಷ್ಟೇ.
ಕೆಲವೊಮ್ಮೆ ತೀವ್ರ ವಾದ ಮಳೆಯಕಾರಣ ಹತ್ತಿರದ ಹಳ್ಳಹೊಳೆ ಗಳು ತುಂಬಿಹರಿದು ಗದ್ದೆಮೇಲೆಲ್ಲ ಬಂದು ಯಾವುದೊ ನದಿಯಂತಾಗುವುದನ್ನು ಕಾಣಬಹುದು
ಅವಾಗೆಲ್ಲ ಒಂದ್ ಸಣ್ ಮಳೆ ಬಂದ್ರೆ ಸಾಕು ಎಲ್ಲಿಯೊ ಮೂಲೆಯಲ್ಲಿದ್ದ ಗೇರುಬೀಜ,ಹಲಸಿನಬೀಜ ಈಚೆ ಬರುತ್ತಿತ್ತು .ಈಗ ಅದೆಲ್ಲ ಯಾರ್ಮಾಡ್ತಾರೇ.‌
ಮಲೆನಾಡಲ್ಲಿ ಮಳೆಗಾಳಿಗೆ ಮರಗಳು ಮನೆಮೇಲೆ-ವಿದ್ಯುತ್ ತಂತಿಯ ಮೇಲೆ ಬೀಳುವುದರಿಂದ ಮನೆಲೀ ಸೀಮೆಎಣ್ಣೆ ದೀಪವೇ ಆಸರೆ ಅದನ್ನು ಒಂದ್ ಹತ್ತಾರು ಸಲ ಹಚ್ಚಬೇಕು ಗಾಳಿಯಿಂದಾಗಿ.
ಇನ್ನು ಫೋನ್ ಸಂಪರ್ಕ ದೂರದ ಮಾತು ಕರೆಂಟ್ ಹೊದ ಮರುದಿನವೇ ಅದು ಕೆಲಸ ನಿಲ್ಲಿರುವುದು. ಒಮ್ಮೊಮ್ಮೆ ಅದಕ್ಕೆ ಸೆಲ್ ಹಾಕ್ಬೇಕಿತ್ತು ಅನಿಸುವುದು.
ಈ ಜೋರಾದ ಮಳೆಗಳು ಶುರುವಾಗುವುದಕ್ಕೆ ಮುನ್ನ ಬರುವ ಮಳೆ ಸಮಯದಲ್ಲಿ,
ಹೊಳೆಯಲ್ಲಿರುವ ಮೀನು ಗಳು ಗದ್ದೆ ಬರುವುದು, ಅದನ್ನು ಹಿಡಿಯು ತಂಡ ತಂಡವಾಗಿಯೆ ಹಳ್ಳಿಗರು ಧಾವಿಸುವರು..
ಮನೆ ಹೊರಗೆ ನಿಂತು” ಎಷ್ಡ್ ಲೈಟ್ ಕಾಣ್ತೊ.” ಎಂದು ನೊಡುವರು.
ಗಾಳಿ ಇಲ್ಲದೆ ಬರೀ ಮಳೆ ಯೇ ಬಂದರೆ ಅದರ ಶಬ್ದಕ್ಕೆ ರಾತ್ರಿ ನಿದ್ದೆ ಚೆನ್ನಾಗಿ ಬರುದಂತೂ ನಿಜ.
Tv mobileಗಳು ನಿರ್ಜೀವ ವಾಗಿ ಮೂಲೆ ಸೇರಿರುತ್ತವೆ.
ಅರೆ ಒಣಕು ಸೌದೆ ಒಲೆಗಿಟ್ಟು ಕೂತ್ರೆ ಅಲ್ಲಿಂದೇಳು ಮನಸ್ಸೆ ಇಲ್ಲ..
ಹಿಂದೆಲ್ಲಾ ಕರೆಂಟ್ ಇಲ್ಲದೆ ಹೊದರು ,ಒಂದು ಬದಿಯಲ್ಲಿ “ಆಕಾಶವಾಣಿ ವಾರ್ತೆಗಳು ಓದುತ್ತಿರುವವರು…”
ಎನ್ನುವ ರೇಡಿಯೋ ದ ದ್ವನಿ ಇರುತ್ತಿತ್ತು ,ಈಗ ಅವೆಲ್ಲ ಇಲ್ಲ
ಈಗಿನ Tv ಗಳಿಗೆ ನಮ್ಮಂತೆಯೆ ಚಳಿ ಎಂದು ಬಟ್ಟೆ ಮುಚ್ಚಿಟ್ಟರೆ ತೆಗೆಯುವುದು ಕರೆಂಟ್ ಕೃಪೆ ತೊರಿದ ಮೇಲೆಯೇ.
ಮನೆಗ್ ನೀರ್ತರೊದ್ ಒಂದ್ ಕೆಲ್ಸ ಇಲ್ಲ ಮನೆಮುಂದೆ ಹಾಕಿದ ದೊಣಿಯಲ್ಲಿ ಹಿಡಿದ ನೀರೆ ಉಪಯೊಗ.
ಚೂರ್ ಮಳೆ ಕಮ್ಮಿಆದ್ರೆ ಸಾಕ್ ಕೊಡೆ ಹಿಡ್ಕೊಂಡೊ ಹಾಗೇಯೊ ಹೊರಟ್ ಬಿಡ್ತಾರೆ ಒಂದ್ ರೌಂಡ್ ಗೆ..ಎಲ್ಲೆಲ್ಲಿ ಎನೇನಾಗಿದೆ ಎಂದು ನೋಡಲು ವಾಪಾಸ್ ಬಂದ್ ಆದೆ ಪುರಾಣ ಮತ್ತೆ.
ನಾವು ಚಿಕ್ಕವರಿರುವಾಗ ಜೊರ್ ಮಳೆ ಬಂದ್ರೆ ಎರಡು ರೀತಿಯ ಖುಷಿ.. ಒಂದು ನಮ್ಗೆ ಶಾಲೆಗೆ ರಜೆ ಸಿಗುತ್ತಿತ್ತು…ಇನ್ನೊಂದು ನಾವು ಆಟವಾಡುವಾಗ ಕಳೆದುಕೊಂಡ ಗೋಲಿ ಮತ್ತಿತರ ವಸ್ತುಗಳು ಮತ್ತೆ ಕೈಸೇರುತ್ತಿದ್ದವು ,ಎಲ್ಲೊ ಮಣ್ಣಲ್ಲಿ ಹುದುಗಿರ್ತವೆ ಮಳೆ ರಭಸಕ್ಕೆ ಮಣ್ಹೊಗಿ ಕಾಣ್ತವೆ.
ಹಳ್ಳಿಗರು ಈ ಸಂದರ್ಭದಲ್ಲಿ ಮುರುಗನಹುಳಿ ಒಣಗಿಸುವುದೇ ಕಾಯಕ ಹೊಗೆ ಎಳ್ಸ್ಕೊಂಡು ಕೂರೊದು .
ಮಳೆಗಾಲಕ್ಕೆಂದು ಮಾಡಿಟ್ಟ ಸೌದೆ ಖಾಲಿಯಾದಂತೆ ..ಎಲ್ಲಿಂದಾದ್ರು ಚಂಡಿ ಸೌದೆ ತಂದು ಒಲೆ ಗಿಟ್ಟರೆ ಚಳಿಗೇಂತ ಒಲೆ ಬುಡ ಹಿಡಿದವರಿಗೆ ದರ್ಮಸಂಕಟವಾಗುವುದ್…ಎದ್ ಹೊದ್ರೆ ಚಳಿ..ಅಲ್ಲೆ ಇದ್ರೆ ಚುಂಯ್ ಎನ್ನುವ ಶಬ್ದದ ಜೊತೆ ಆಗಾಧ ಹೊಗೆ ಕಣ್ಣಲ್ಲಿ ನೀರು ತರಿಸುವುದು.
ಈ ಮದ್ಯೆ ಆಗಾಗ ಮಳೆಬಿಟ್ಟ ಸಮಯದಲ್ಲಿ ನಿಶ್ಯಬ್ದ ವಾದಾಗ ದೂರದಲ್ಲಿ ಹರಿಯುವ ಹೊಳೆಯ ಸದ್ದು ಕೇಳಿಸಿದ್ರೆ ಅದು ಉಕ್ಕಿಹರಿಯುವುದೊ ಎಂದೆನಿಸುವುದು.
ಇನ್ ಜೊರ್ ಗಾಳಿಗೆ ಹಿಡ್ಕೊಂಡ ಛತ್ರಿ ಡಿಶ್ ನಂತಾದ್ರೆ ಮಳೆಲಿನೆಂದು ಮುಂಗಾರುಮಳೆ ಹಾಡು ಹೇಳ್ತಾ ಬರ್ಬೇಕಷ್ಟೆ…ಹಿಂದಿನ ಕಾಲದ ನಾಕಡಿ ಉದ್ದದ ಛತ್ರಿ ಗಳಾದ್ರೆ ಮತ್ತೆ ಸರಿಪಡಿಸಿ ಬಳಸಬಹುದು.
ಮಳೆಗಾಲದ ರಾತ್ರಿ ಕಪ್ಪೆಗಳ ಸಂಗೀತ ಕಾರ್ಯಕ್ರಮ ದಲ್ಲಿ..ಮನೆಹೊರಗೆ ಪಾತ್ರೆಗೆ ಬೀಳುವ ನೀರು ಯಾವುದೊ ವಾದ್ಯ ನುಡಿಸಿದಂತಿರುವುದು.
ಮಲೆನಾಡಲ್ಲಿ ನಾಟಿ ಪ್ರಕ್ರಿಯೆ ಪ್ರಾರಂಭ ವಾಗಿರುವುದರಿಂದ ಗದ್ದೆ ಅಂಚುಗಳನ್ನು ಕಡಿದು ಮೇಲೆ ಹಾಕಿರುತ್ತಾರೆ ಅದರ ಮೇಲೆಯೆ ಅತ್ತಿಂದಿತ್ತ ಸಾಗಬೇಕಾದರೆ ಮೈಕೆಲ್ ಜಾಕ್ಸನ್ ರವರ ಮೂನ್ ವಾಕ್ ಅನ್ನು ಸಹ ಕಲಿತ ಅನುಬವವಾಗುವುದು.
ಇನ್ನು ಸ್ವಲ್ಪ ಕಾಡಿನ ದಾರಿಯಾದರೆ ಗಾಳಿಯ ಭಯದ ಜೊತೆ ಜಿಗಣೆ ಗಳಿಗೆ ರಕ್ತದಾನಿ ಯಾಗಲೇಬೇಕು.
ಇದನ್ನೆಲ್ಲ ಹೇಳುವಾಗ ಒಮ್ಮೆ ಮಳೆ ನಿಂತು ಸೂರ್ಯ ಇಣುಕಿ ಹೊದ..

type ಮಾಡುತ್ತಾ ಕುಳಿತವನಿಗೆ ಅಂಗಿ ಒಂದು ಬದಿ ಆ ಕರಿ ನೀರಿಂದ ಒದ್ದೆಯಾಗಿದ್ದು ತಿಳಿಯಿತು ಪೂರ್ಣ ವಿರಾಮ ಇಡಬೇಕಾದ ಸಮಯ,
ನಾಳೆ mobile ಟವರ್ ಅನ್ ಆಗಬಹುದು ನಾಡಿದ್ದು ಬರಬಹುದು ಎಂದು ಚಾರ್ಜ್ ಖಾಲಿಮಾಡದೆ ಇಟ್ಟ ಮೊಬೈಲ್ ನನಗೆ ಏನೋ ಬರೆಯಲು ಸಹಕಾರಿ ಯಾಯಿತು….
Shashi@.

LEAVE A REPLY

Please enter your comment!
Please enter your name here