‘ಮಹಾಪಲಾಯನ’ ಇದು ಕನ್ನಡದ ಪ್ರಖ್ಯಾತ ಬರಹಗಾರ, ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಅನುವಾದ ಮಾಡಿದ ಅದ್ಭುತ ಕೃತಿ, ರಷ್ಯಾದ ಲೇಖಕ ‘ಸ್ಲಾವೊಮಿರ್ ರಾವಿಸ್’ಬರೆದ ಅದ್ಭುತ ಕೃತಿ “ದಿ ಲಾಂಗ್ ವಾಕ್” ಎಂಬ ಕೃತಿಯ ಭಾಷಾನುವಾದವೇ ಈ ಮಹಾಪಲಾಯನ. ಅದು ೧೯ನೇ ಶತಮಾನದಲ್ಲಿ ರಷ್ಯಾದಲ್ಲಿ ಕಮುನಿಷ್ಟರ ಕಾರುಬಾರು ನೆಡೆಯುತ್ತಿರುವ ಕಾಲದಲ್ಲಿ ರಷ್ಯಾದ ಕಮುನಿಷ್ಟರು ಸೋವಿಯತ್‌ ರಷ್ಯಾದ ಕಮುನಿಷ್ಟ್ ವಿರೋಧಿಗಳ ವಿರುದ್ಧ ಮಾಡುತ್ತಿದ್ದ ಕುತಂತ್ರದ ಜಾಲವನ್ನು ಬಯಲು ಮಾಡುವ ಕೆಲವೇ ಕೆಲವು ಅಮೂಲ್ಯ ಕೃತಿಗಳಲ್ಲಿ ಈ ಮಹಾಪಲಾಯನವೂ ಒಂದು, ಅದರಲ್ಲೂ ಕನ್ನಡದ ಓದುಗರನ್ನು ಅಯಸ್ಕಾಂತದಂತೆ ಸೆಳೆಯುವ ತೇಜಸ್ವಿ ಬರಹದ ಛಾಪನ್ನು ಈ ಕೃತಿಯಲ್ಲೂ ಕಾಣಬಹುದು.

ಸೋವಿಯತ್ ರಷ್ಯಾದ ಕಮುನಿಷ್ಟರನ್ನು ವಿರೋಧಿಸಿದ ಕಾರಣದಿಂದ ಸೈಬಿರಿಯಾದ ಹಿಮನಾಡಿಗೆ ಸೆರೆಯಾಳುಗಳಾಗಿ ಹೋಗುವವರನ್ನ ಆ ಹಿಮನಾಡಿನಲ್ಲಿ ನೆಡೆಸಿಕೊಳ್ಳವ ರೀತಿ, ಅವರಿಗೆ ಕೊಡುತ್ತಿದ್ದ ಮೈಮೂಳೆ ಮುರಿಯುವಂತ ಕೆಲಸ, ಬಕಾಸುರನ ಹೊಟ್ಟೆಗೆ ಕೊಡುತ್ತಿದ್ದ ಒಣಗಿದ ಬ್ರೆಡ್ಗಳು, ಅಷ್ಟಲ್ಲದೆ ಯುವವಯಸ್ಸಿನಲ್ಲಿ ಸ್ವತಂತ್ರದ ಕನಸು ಕಾಣುತ್ತಿದ್ದ ಸ್ಲಾವೊಮಿರ್ ರಾವಿಸ್’ನಂತ ಯುವ ಜನರಿಗೆ ಸ್ವತಂತ್ರದ ಬಯಕೆ ಆ ಹಿಮನಾಡು ಸೈಬೀರಿಯಾದಲ್ಲಿ ಬೆಳೆಯಲು ಅವರ ಅತ್ಮಾಭಿಮಾನವೇ ಕಾರಣ ಎನ್ನುವುದನ್ನು ತೇಜಸ್ವಿ ಅಮೋಘವಾಗಿ ಚಿತ್ರಿಸಿದ್ದಾರೆ, ಆ ಕಮುನಿಷ್ಟರ ಹಿಮ ಜೈಲಿಂದ ಸ್ವಾತಂತ್ರ್ಯದ ನಾಡಿಗೆ ಹೋಗುವ ಕನಸಲ್ಲಿ ಇದ್ದ ಕೆಲವರು ಈ ಸ್ಲಾವೊಮಿರ್’ನ ಜೊತೆಗೆ ಬಂದು ನಿಲ್ಲವುದು, ಪಲಾಯನದ ಸುಳಿವು ಕಮುನಿಷ್ಟರ ಅಧಿಕಾರಿಗಳಿಗೆ ತಿಳಿದರೆ ಅವರನ್ನು ನಾಯಿಗಳ ತರ ಬೋನಿನಲ್ಲಿ ಬಂಧಿಸುತ್ತಿದ್ದರು ಎಂಬ ಅಪಾಯವನ್ನು ಅರಿತು ಅವರ ಪಲಾಯನದ ಕೆಲಸ ಮಾಡಬೇಕಾಗಿತ್ತು, ಅಂತಹ ಸಂದರ್ಭದಲ್ಲಿ ಈ ಮಹಾಪಲಾಯನಕ್ಕೆ ಒಂದು ತಿರುವು ನೀಡುವ ಆ ಕಮುನಿಷ್ಟ ಜೈಲರ್’ನ ಹೆಂಡತಿ, ಆ ಸೈಬೀರಿಯಾದ ಜೈಲಿನ ನೀತಿಗೊ ಅಥವಾ ತನ್ನ ಗಂಡನನ್ನು ಈ ಜಾಗಕ್ಕೆ ವರ್ಗಮಾಡಿದ ಕಮುನಿಷ್ಟರಿಗೆ ಬುದ್ದಿ ಕಲಿಸಲೆಂದೊ, ಅಂತಹ ಹಿಮ ನಾಡಿನ ಒಬ್ಬಂಟಿ ಜೀವನಕ್ಕೆ ಬೇಸತ್ತೋ .ಆ ಜೈಲರ್’ನ ಹೆಂಡತಿ ಕೂಡ ಈ ಮಹಾಪಲಾಯನಕ್ಕೆ ಉತ್ತೇಜನ ನೀಡುವುದು, ಅವರಿಗೆ ಮಾಡುವ ಸಹಾಯ, ಮತ್ತು ಸ್ಲಾವೊಮಿರ್ ಆಕೆಯ ಸಹಾಯ ಮತ್ತು ಸೂಚನೆಯಂತೆ ತನ್ನಂತೆ ಪಲಾಯನದ ಹಾದಿ ಕಾಯುತ್ತಿದ್ದ 6 ಜನರೊಂದಿಗೆ ಆ ಭಯಂಕರ ಹಿಮನಾಡು ಸೈಬಿರಿಯಾದ ಜೈಲಿನಿಂದ ಕಮುನಿಷ್ಟ್ ಸೈನಿಕರ ಕಣ್’ಗಾವಲು ತಪ್ಪಿಸಿ ಪರಾರಿಯಾಗುವುದು, ಸಿಕ್ಕಿಬಿದ್ದರೆ ಕಮುನಿಷ್ಟರು ಕೊಡುವ ಶಿಕ್ಷೆಯನ್ನು ನೆನದು ಬರಿಗಾಲಿನಲ್ಲಿ ಯಾರಿಗೂ ತಿಳಿಯದಂತೆ ನೂರಾರು ಮೈಲುಗಳ ಪಯಣ. ಕಮುನಿಷ್ಟರ ಹುಡುಕಾಟ ನಿಂತಿರ ಬಹುದು ಎಂಬ ಸೂಚನೆ ಸಿಕ್ಕರೂ ತಮ್ಮ ಗುರಿಯನ್ನು ಮುಟ್ಟಲು ಅವರು ಮಾಡುವ ಸಹಾಯಗಳು, ಕಾಡಿನ ದಾರಿಯಲ್ಲಿ ಕಮುನಿಷ್ಟರ ರಾಕ್ಷಸ ಕೈಯಿಂದ ತಪ್ಪಿಸಿಕೊಂಡು ,ತಮ್ಮಂತದೇ ಮತ್ತೊಂದು ಸ್ಥಿತಿಯಲ್ಲಿದ್ದ ಅನಾಥ ಬಾಲಕಿಯ ಮೇಲೆ ಇವರು ತೋರುವ ಕರುಣೆ, ಈ ಮಹಾಪಲಾಯನದ ಯಾನದಲ್ಲಿ ಈ ಅನಾಥ ಬಾಲಕಿ ಇವರ ಜೊತೆಯಲ್ಲಿ ಬರುವುದು, ದಾರಿಯಲ್ಲಿ ಹೆಪ್ಪುಗಟ್ಟುವ ಚಳಿಯಲ್ಲಿದ್ದ ಸೈಬಿರಿಯನ್ ರಷ್ಯನ್ ನದಿಗಳನ್ನು ದಾಟುವ ಸಾಹಸ, ರಷ್ಯನ್’‌ರ ಕಣ್ಣಿಗೆ ಬೀಳದಂತೆ ಬೃಹತ್ ರಷ್ಯಾವನ್ನು ದಾಟಿ ಮಂಗೋಲಿಯಾ ತಲುಪುವುದು ಅವರಿಗೆ ಮಂಗೋಲಿಯಾ ತಲುಪಿದಾಗ ತಾವು ಸ್ವಲ್ಪ ಮಟ್ಟಿಗೆ ಸುರಕ್ಷಿತ ಎನಿಸಿದಾಗ ನಿಲ್ಲದೆ ದಾರಿ ಮೂಲಕ ಮತ್ತೆ ಮಾಡುವ ರೋಚರ ಯಾತ್ರೆ, ಕಮುನಿಷ್ಟರ ಕಾಟದಿಂದ ಮನುಷ್ಯ ಜನಾಂಗದ ಮೇಲೆ ನಂಬಿಕೆ ಕಳೆದುಕೊಂಡ ಈ ಮಹಾಪಲಾಯನಿಗಳಿಗೆ ಅಲೆಮಾರಿ ಮಂಗೋಲಿಯನ್ನರು ಮಾಡುವ ಸಹಾಯ ಹೊಟ್ಟೆಯ ಹಸಿವನ್ನು ತಾಳಲಾರದೆ ಅವರು ಮಾಡುವ ಕಳ್ಳತನಗಳು ನಂತರ ಮಂಗೋಲಿಯಾದಿಂದ ಚೀನಾಕ್ಕೆ ಬರುವುದು, ಅವರಿಗೆ ಅರಿವಿಲ್ಲದಂತೆ ಭಯಂಕರ ‘ಗೋಬಿ’ ಮರುಭೂಮಿಯ ಪ್ರವೇಶ ಹಿಮದ ಸಮುದ್ರ ದಾಟಿ ಬಂದವರು ಮತ್ತೆ ಮರಳಿನ ಸಾಗರ ದಾಟಬೇಕಾದಿದ್ದು ಹಗಲು ಬಿಸಿಲುಗಳ ಲೆಕ್ಕವಿಲ್ಲದೇ ಗೊತ್ತಿಲ್ಲದ ಭೀಕರ ಗೋಬಿ ಮರುಭೂಮಿಯಲ್ಲಿ ನೆಡವ ಅವರ ಸಾಹಸ ಯಾತ್ರೆ, ಆ ಸಾಹಸ ಯಾತ್ರೆಯ ನಡುವೆಯೇ ಅವರ ಜೊತೆಯಲ್ಲಿ ಪಲಾಯನ ದಿಕ್ಕಿನಲ್ಲಿ ಸಾಗುತ್ತಿದ್ದ ಅನಾಥ ಬಾಲಕಿಯ ಸಾವು, ನಂತರ ಈ ಗೋಬಿ ಮರುಭೂಮಿಯಲ್ಲಿ ಮತ್ತೊಬ್ಬ ಜೊತೆಗಾರನ ಸಾವು, ಆಹಾರವಿಲ್ಲದೆ ದಿನಗಟ್ಟಲೆ ಈ ಭೀಕರ ಮರುಭೂಮಿಯಲ್ಲಿನ ಪಯಣದಿಂದ ಎಲ್ಲಾರು ಈ ಮರುಭೂಮಿಯಲ್ಲಿ ಸಾಯುವುದು ಖಚಿತ ಎಂದು ಕೊಂಡಾಗ ಅಲ್ಲಿ ಹಾವುಗಳನ್ನು ತಿಂದು ಬದುಕಿದ್ದು, ಅವರು ಆ ಭೀಕರ ಮರುಭೂಮಿ ದಾಟಿದ್ದು. ನಂತರ ಟಿಬೇಟ್ ದಾರಿ ಹಿಡಿದಿದು ಟಿಬೇಟಿಯನ್’ರ ಅತಿಥಿ ಸತ್ಕಾರ, ಅವರ ಸಹಾಯದ ನಂತರ ಪ್ರಪಂಚದ ಅತೀ ದೊಡ್ಡ ಪರ್ವತ ಶ್ರೇಣಿ ಹಿಮಾಲಯದ ಮೇಲಿನ ಮಹಾ ಯಾತ್ರೆ, ಯಾವುದೇ ವೈಜ್ಞಾನಿಕ ಸಲಕರಣೆಗಳು ಇಲ್ಲದೇ ಹಿಮಾಲಯದ ಶಿಖರಗಳನ್ನು ದಾಟಿ, ಹಿಮಾಲಯದ ದಾರಿಯಲ್ಲಿ ಸಾಗುವಾಗ ಮತ್ತೊಬ್ಬನ ಸಾವು, ಆದರೂ ಗುರಿಯೆಡೆಗೆ ಸಾಗುವ ಈ ಪಲಾಯನಕಾರರ ಛಲ, ಇನ್ನೆನೂ ಹಿಮಾಲಯದ ದಾಟಿ ತಮ್ಮ ಗುರಿ ತಲುಪಿದರು ಎನ್ನುವಷ್ಟರಲ್ಲಿ ಹಿಮಾಲಯದ ಬೃಹತ್ ಕಂದಕದೊಳಗೆ ಕಾಣದಂತೆ ಮಾಯವಾಗುವ ಮತ್ತೊಬ್ಬ, ಹಿಮಾಲಯ ಮುಗಿದು ಭಾರತ ಸಮೀಪವಾದಗ ಹಿಮಾಲಯದಲ್ಲಿ ಕಂಡು ಬಂದ, ಅದುವರೆಗೊ ಅವರು ನೊಡದ ವಿಚಿತ್ರ ಮಾನವ ರೀತಿಯ ಪ್ರಾಣಿ , ಕೊನೆಗೆ ಭಾರತದ ಗಡಿಗೆ ಬಂದು ತಾವು ಸುರಕ್ಷಿತ ಎಂದು ತಿಳಿದ ಮೇಲೆ ಭಾರತೀಯ ಸೇನೆ ಅವರಿಗೆ ಮಾಡಿದ ಸಹಾಯ ,ಭಾರತೀಯ ಸೇನೆಯ ಸಹಾಯದಿಂದ, ನಾಲ್ಕು ಸಾವಿರ ಮೈಲಿಗಳ ಮಹಾಪಲಾಯನದ ನಂತರ ಅವರು ಮತ್ತೆ ಮೊದಲಿನಂತೆ ಆಗಲು ಭಾರತೀಯರು ಮಾಡಿದ ಸಹಾಯ.ಈ ಎಂಟು ಜನರ ಮಹಾ ಪಲಾಯನದ ಅಂತ್ಯದಲ್ಲಿ ಗುರಿ ತಲುಪಿದವರು ಮೂವರು ಮಾತ್ರ ,ಅದರಲ್ಲಿ ಈ ಕತೆಯ ನಾಯಕನ ಸ್ಲಾವೊಮಿರ್ ಕೂಡ ಒಬ್ಬ.

ಅನಂತ ಕಷ್ಟಗಳ ನಂತರ ನಾಲ್ಕು ಸಾವಿರ ಮೈಲಿಗಳು ಈ ಮಹಾ ಪಲಾಯನವನ್ನು ಅವರು ತಮ್ಮ ಗುರಿಯನ್ನು ಮುಟ್ಟಲು ಮಾಡುವ ಮಹಾ ಸಾಹಸವನ್ನು ಕಮುನಿಷ್ಟರ ಕ್ರೌರ್ಯ ಬಡಜನರ ಮಾನವೀಯತೆಯ ಮುಖಗಳನ್ನ ‘ತೇಜಸ್ವಿಯವರು’ ತಮ್ಮ ಎಂದಿನ ಶೈಲಿಯಂತೆ ಓದುಗರ ಮುಂದೆ ಇಟ್ಟಿರುವುದನ್ನು ಈ “ಮಹಾಪಲಾಯನ” ದಲ್ಲಿ ನಾವು ಕಾಣಬಹುದು.ಇಂತಹ ಪುಸ್ತಕವನ್ನು ನಾವು ಓದಿದರೆ ಮಾತ್ರ ಆ ಮಹಾಪಲಾಯನಕ್ಕೆ, ಅದನ್ನು ಕನ್ನಡಕ್ಕೆ ಕೊಟ್ಟ ಪೂರ್ಣಚಂದ್ರ ತೇಜಸ್ವಿ ಯವರಿಗೆ ನಾವು ಸಲ್ಲಿಸಬಹುದಾದ ಕೃತಜ್ಞತೆ ಅಷ್ಟೇ……

LEAVE A REPLY

Please enter your comment!
Please enter your name here